ಉದ್ರೇಕಕಾರಿ ಕಾಂಡೋಮ್ ಜಾಹೀರಾತಿಗೆ ಕೊಕ್ಕೆ
ಕಾಮಸೂತ್ರ ಹುಟ್ಟುಹಾಕಿದ ನಾಡಿನಲ್ಲಿ ಕಾಮಕ್ಕೆ ಬರವೆ? ಜಗತ್ತಿನ ಎರಡನೇ
ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಿರುವ ಭಾರತದಲ್ಲಿ
ಹೆಚ್ಚಾನುಹೆಚ್ಚು ಲೈಂಗಿಕ ಚಟುವಟಿಕೆಗಳು ನಡೆಯುವುದು ನಾಲ್ಕು ಗೋಡೆಗಳ ನಡುವೆಯೆ. ಆದರೆ,
ಪಾಶ್ಚಿಮಾತ್ಯ ಸಂಸ್ಕೃತಿಗೆ ಈಗ ಸಾಕಷ್ಟು ತೆರೆದುಕೊಂಡಿರುವುದರಿಂದ ಮಹಾನಗರಗಳ
ತೆರೆದುಕೊಂಡಿರುವ ಪ್ರದೇಶಗಳಲ್ಲಿ ಕೂಡ ಕಾಮಕೇಳಿಯನ್ನು ಮುಕ್ತವಾಗಿ ನೋಡಬಹುದಾಗಿದೆ.
ಮದುವೆ ಎಂಬುದು ಗಂಡುಹೆಣ್ಣುಗಳನ್ನು ಬಂಧಿಸುತ್ತದೆ, ಕಾಮ ಆ ಬಂಧವನ್ನು ಮತ್ತಷ್ಟು
ಗಟ್ಟಿಯಾಗಿಸುತ್ತದೆ ಎನ್ನುವ ಮಾತು ಭಾರತದಲ್ಲಿ ಕೂಡ ಹಳೆಯದಾಗಿದೆ. ಮೆಟ್ರೋಪಾಲಿಟನ್
ಸಿಟಿಗಳಲ್ಲಿ ಲಿವ್-ಇನ್-ಪಾರ್ಟನರ್ ಶಿಪ್ ಸಾಕಷ್ಟು ಚಿಗಿತುಕೊಳ್ಳುತ್ತಿದೆ. ಗಂಡು
ಹೆಣ್ಣು ಒಂದಾಗಿರಬೇಕೆಂದರೆ ಮದುವೆಯಾಗಿರಲೇಬೇಕು ಎಂದೇನು ಇಲ್ಲ ಎಂಬ ಸನ್ನಿವೇಶ ನಮ್ಮ
ಭಾರತದಲ್ಲಿಯೇ ನಿರ್ಮಾಣವಾಗಿದೆ.
ಎಷ್ಟೇ ನಿಯಂತ್ರಣಗಳನ್ನು ಒಡ್ಡಿದ್ದರೂ ಪಾರ್ಕುಗಳಲ್ಲಿ, ಕಲ್ಲಬಂಡೆಗಳ ಹಿಂದುಗಡೆ,
ಹೋಟೆಲುಗಳ ರೂಮುಗಳಲ್ಲಿ, ರೆಸಾರ್ಟುಗಳಲ್ಲಿ, ಕೆರೆಯ ದಂಡೆಯ ಮೇಲೆ, ಗುಡ್ಡಬೆಟ್ಟಗಳ
ಕವಲುಗಳಲ್ಲಿ ಮುಕ್ತವಾಗಿ ಕಾಮಕೇಳಿ ನಡೆಯುತ್ತಿದೆ. ಆದರೆ, ಸಣ್ಣಪಟ್ಟಣಗಳಲ್ಲಿ, ಸಣ್ಣ
ಊರುಗಳಲ್ಲಿ, ಹಳ್ಳಿಗಳಲ್ಲಿ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಅವಿಭಕ್ತ ಕುಟುಂಬಗಳು
ಅಷ್ಟು ಮುಕ್ತ ಅವಕಾಶವನ್ನು ಒದಗಿಸುವುದಿಲ್ಲ.
ಅಂತೇನಾದರೂ ಅಂದುಕೊಂಡರೆ ಅದೂ ತಪ್ಪು. ಇಂಡಿಯಾ ಟುಡೆ ಮತ್ತು ನೀಲ್ಸನ್ ನಡೆಸಿದ
'ಬಿಟ್ವೀನ್ ದಿ ಶೀಟ್ಸ್ ಆಫ್ ಸ್ಮಾಲ್ ಟೌನ್ ಇಂಡಿಯಾ' ಸಮೀಕ್ಷೆಯಲ್ಲಿ ವಿಸ್ಮಯಕಾರಿಯಾದ
ಮತ್ತು ಈ ಪ್ರದೇಶಗಳ ಬಗ್ಗೆ ಹೆಚ್ಚಾಗಿ ತಿಳಿಯದ ಅನೇಕ ಸಂಗತಿಗಳು ಬಹಿರಂಗವಾಗಿವೆ. ಒಟ್ಟು
ಹನ್ನೆರಡು ಊರುಗಳಲ್ಲಿ ನಡೆಸಿದ ಸಮೀಕ್ಷೆ ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದೆ. ಅವು
ಕೆಳಗಿನಂತಿವೆ.
No comments:
Post a Comment